ಬಾಗಲಕೋಟೆ ; ಬಾಗಲಕೋಟೆ ಭಗವಂತ ಇಲ್ಲಿನ ಮಹಾಮಹಿಮ ಶ್ರೀ ಲಡ್ಡು ಮುತ್ಯಾರ ಹೆಸರು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದು ಭಕ್ತರ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ಲಡ್ಡುಮುತ್ಯಾ ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
೧೯೯೩ ರಲ್ಲಿ ದೇಹ ತ್ಯಾಗ ಮಾಡಿದ ಶ್ರೀ ಲಡ್ಡುಮು ತ್ಯಾರವರ ಗದ್ದುಗೆಯನ್ನು ಬಾಗಲಕೋಟೆಯ ಹತ್ತಿರದ ಸೀಮಿಕೇರಿಯಲ್ಲಿ ನಿರ್ಮಾಣ ಮಾಡುವ ಮೂಲಕ ಧಾವಿ ಕ ಕ್ಷೇತ್ರವಾಗಿ ನೆಲೆ ನಿಂತಿದೆ. ಬಾಗಲಕೋಟೆಯಲ್ಲಿ ನೆಲೆಸಿದ್ದ ಲಡ್ಡುಮುತ್ಯಾರು ಪವಾಡಗಳ ಮೂಲಕ ಪ್ರಸಿದ್ದಿ ಪಡೆದಿದ್ದರು. ಬಾಗಲಕೋಟೆ ಹಾಗೂ ಸುತ್ತ ಮುತ್ತ ಅವರಿಗೆ ಅಸಂಖ್ಯಾತ ಭಕ್ತರಿದ್ದಾರೆ. ಇತ್ತೀಚೆಗೆ ಶ್ರೀ ಲಡ್ಡುಮುತ್ಯಾರ ಅವತಾರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ತಿರುಗುವ ಫ್ಯಾನ್ ನಿಲ್ಲಿಸುವುದನ್ನು ಪವಾಡ ಎಂದು ಬಿಂಬಿಸಿ ಅದನ್ನು ಟ್ರೋಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಯುವಕರು ಸಹ “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ” ಹಾಡು ಬಳಸಿ ಟ್ರೋಲ್ ಮಾಡುತಿ ದ್ದಾರೆ. ಆದ್ದರಿಂದ ಸಂಭಂದಿ ಸಿದ ವ್ಯಕ್ತಿಗಳಿಗೆ ಟ್ರೋಲ್ ನಿಲ್ಲಿಸುವಂತೆ ಶ್ರೀ ಲಡ್ಡುಮುತ್ಯಾ ಭಕ್ತ ಮಂಡಳಿ ಎಚ್ಚರಿಕೆಯನ್ನು ನೀಡಿದೆ.ಶ್ರೀ ಲಡ್ಡುಮುತ್ಯಾರವರ ಆಶ್ರಮಕ್ಕೆ ಯಾವುದೇ ಸ್ವಾಮಿಜಿ ಅಥವಾ ಉತ್ತರಾಧಿಕಾರಿ ಎಂ ದು ಯಾರನ್ನೂ ನೇಮಿಸಿಲ್ಲ ಟ್ರಸ್ಟ ಮಾಡಿಕೊಂಡು ಸಂಸ್ಥೆ ಯನ್ನು ಶ್ರೀ ಲಡ್ಡುಮುತ್ಯಾ ಭಕ್ತ ಮಂಡಳಿ ಮುನ್ನಡೆಸುತ್ತಿದೆ ಎಂದು ಮಂಡಳಿಯ ಅಧ್ಯP ರಾದ ಷಣ್ಮುಕಪ್ಪ ಹದ್ಲಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಸಕ್ರೋಜಿ, ಖಚಾಂಚಿ ಕುಮಾರ ಸಜ್ಜನ ಪ್ರಕಟಣೆಯ