ಬಾಗಲಕೋಟೆ: ಚಿಕ್ಕತಿರುಪತಿ ಎಂದ್ದೇ ಖ್ಯಾತಿಗಳಿಸಿರುವ ವಿದ್ಯಾಗಿರಿಯ ಬಾಲಾಜಿ ಮಂದಿರದಲ್ಲಿ ಅ.೩ ರಿಂದ ಅ.೧೨ರವರೆಗೆ ಅದ್ಧೂರಿ ಶ್ರೀವಾರಿ ಬ್ರಹ್ಮೋತ್ಸವ ಜರುಗಲಿದೆ.
ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಅಭಿಷೇಕ, ೯ ಗಂಟೆಗೆ ಹೋಮ, ಸಂಜೆ ೬ ಗಂಟೆಗೆ ರಥೋತ್ಸವ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ ೭.೩೦ರಿಂದ ಪ್ರಸಾದದ ವ್ಯವಸ್ಥೆ ಇರಲಿದೆ ಎಂದು ಬಾಲಾಜಿ ಮಂದಿರ ಟ್ರಸ್ಟ್ ಚೇರ್ಮನ್ ದ್ವಾರಕಾದಾಸ್ ತೋಸನಿವಾಲ, ಸದಸ್ಯರಾದ ಭರತ ಭಂಗ, ವಿಷ್ಣುದಾಸ್ ಕಾಸಟ, ಶ್ಯಾಮಸುಂದರ ಭಟ್ಟಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.