
ಬಾಗಲಕೋಟೆ ; ಜಿಲ್ಲೆಯಲ್ಲಿ ಇಸ್ಲಾಮಿಕ್ ದೇಶಗಳ ಧ್ವಜ ಪ್ರದರ್ಶನ ಮಾಡಿ ದೇಶ-ಸಂವಿಧಾನ ವಿರೋಧಿ ಕೃತ್ಯ ನಡೆಸಿದ ಮತಾಂಧರ ವಿರುದ್ಧ ಜನಾಕ್ರೋಶ ಪ್ರತಿಭಟನಾ ಮೆರವಣಿಗೆಯನ್ನು ಸೆ. 29vರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.
ಮೆರವಣಿಗೆಯು ನಗರದ ಕಿಲ್ಲಾದ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಳ್ಳಲಿದೆ.
ದೇಶವಿರೋಧಿ ಕೃತ್ಯ ಎಸಗುವವರ ಮೇಲೆ ಕೇವಲ ಕೇಸ್ ಹಾಕಿ ಕೈ ತೊಳೆದುಕೊಳ್ಳುವ ಬದಲು ಬೇರೆ ಜಿಲ್ಲೆ-ರಾಜ್ಯಗಳಿಗೂ ಹರಡಿರಬಹುದಾದ ಈ ಭಯೋತ್ಪಾದಕರ ಜಾಲದ ಬಗ್ಗೆ: ಸಮಗ್ರ ತನಿಖೆ ಮಾಡಲು ಈ ಪ್ರಕರಣಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ NIA ಗೆ ವಹಿಸಬೇಕೆಂದು ಎಂದು ಬಾಗಲಕೋಟೆಯ ರಾಷ್ಟ್ರ ರಕ್ಷಾ ಆಂದೋಲನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.