
ಬಾಗಲಕೋಟೆ: ಎಡಿಜಿಪಿ ಹೆಸರಿನಲ್ಲಿ ಸ್ವಾಮೀಜಿಯೊಬ್ಬರಿಗೂ ೧ ಕೋಟಿ ರು. ಬ್ಲಾಕ್ಮೇಲ್ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಮೀಪದ ಪರಮಹಂಸ ಪರಮ ರಾಮಾರೂಢ ಸ್ವಾಮೀಜಿ ಮೋಸಕ್ಕೆ ಒಳಗಾದವರು. ಸ್ವಾಮೀಜಿಯವರಿಗೆ ಪ್ರಕಾಶ ಮುಧೋಳ ಎಂಬಾತ ಕರೆ ಮಾಡಿ ತಾನು ಡಿಎಸ್ಪಿ ಎಂದು ಹೇಳಿಕೊಂಡು, ನಿಮ್ಮ ಬಗ್ಗೆ ಗೃಹ ಸಚಿವರಿಗೆ ಅನೇಕ ದೂರುಗಳು ಬಂದಿವೆ. ಎಡಿಜಿಪಿಯವರಿಗೆ ಹಣ ನೀಡದಿದ್ದರೆ ನಿನ್ನ ಮಾನ ಹರಾಜ ಹಾಕುತ್ತೇವೆ ಎಂದು ಹೆದರಿಸಿದ್ದಾನೆ.
ನಂತರ ಮತ್ತೊಬ್ಬ ವ್ಯಕ್ತಿ ಎಡಿಜಿಪಿ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ ಗಾಬರಿಗೊಂಡ ಸ್ವಾಮೀಜಿ ಮೊದಲು ೬೧ ಲಕ್ಷ ರು. ನಂತರ ೨೯ ಲಕ್ಷ ರು. ಸೇರಿ ಒಟ್ಟು ೧ ಕೋಟಿ ರು. ನೀಡಿದ್ದಾರೆ.
ಇದಾದ ನಂತರವೂ ಆರೋಪಿಗಳು ಮತ್ತೆ ಹಣಕ್ಕೆ ಪೀಡಿಸಿದಾಗ ಸ್ವಾಮೀಜಿ ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಕಾಶ ಮುಧೋಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಅಭ್ಯರ್ಥಿ ಪ್ರಕಾಶ: ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗುತ್ತಿರುವ ಪ್ರಕಾಶ ಮುಧೋಳನು ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ ೨೦೨೩ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ. ಇತನ ವಿರುದ್ಧ ಹಲವು ಕಡೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ.