
ಬಾಗಲಕೋಟೆ: ಬಾಗಲಕೋಟೆ ನಗರ ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪನೆ ಮೊದನ ದಿನ ಹಾಗೂ ಎರಡನೇ ದಿನ ಗಣೇಶ ಮೂರ್ತಿ ವಿಸರ್ಜನೆಗೆ 5 ಕಡೆಗಳಲ್ಲಿ ಸಂಚಾರಿ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಸ್ಥಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆಗೆ ಹಳೆ ಬಾಗಲಕೋಟೆಯ ಕಿಲ್ಲಾ ಓಣಿ, ನವನಗರದ ಸೆಕ್ಟರ ನಂ.57ರ ಹೆಚ್.ಪಿ.ಪೆಟ್ರೋಲ್ ಪಂಪ್ ಹತ್ತಿರ, ನವನಗರದ ಎಲ್.ಐ.ಸಿ ಸರ್ಕಲ್, ವಿದ್ಯಾಗಿರಿಯ ಬಸ್ ನಿಲ್ದಾಣ ರಸ್ತೆ ಹಾಗೂ ನವನಗರದ ಕಾಳಿದಾಸ ಸರ್ಕಲ್ನಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಸಂಚಾರಿ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜಸದೇ ಜಲಮಾಲಿನ್ಯ ತಡೆಯಲು ನೆರವಾಗುವಂತೆ ಸಂಚಾರಿ ತೊಟ್ಟಿಗಳಲ್ಲಿಯೇ ವಿಸರ್ಜಿಸುವಂತೆ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.