Close Menu
    Facebook X (Twitter) Instagram YouTube
    Facebook X (Twitter) Instagram YouTube
    Sanjedarshan
    Subscribe
    • ರಾಜಕೀಯ
    • ಜಿಲ್ಲೆಗಳು
    • ಅಪರಾಧ
    • ವಿಶೇಷ ವರದಿಗಳು
    • ಸಿನೆಮಾ
    • ಕ್ರೀಡೆ
    • ಕೃಷಿ
    Facebook X (Twitter) Instagram
    Sanjedarshan
    Home»ವಿಶೇಷ ವರದಿಗಳು»ಶಾಂತರೀತಿಯಿಂದ ಗಣೇಶ ಉತ್ಸವ ಆಚರಿಸಿ : ಡಿಸಿ
    ವಿಶೇಷ ವರದಿಗಳು

    ಶಾಂತರೀತಿಯಿಂದ ಗಣೇಶ ಉತ್ಸವ ಆಚರಿಸಿ : ಡಿಸಿ

    SanjeBy SanjeAugust 29, 20242 Mins Read
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email

    ಮಿತವಾದ ಡಿಜೆ ಸೌಂಡ್ ಬಳಕೆಗೆ ಅವಕಾಶ

    ಬಾಗಲಕೋಟೆ ; ಜಿಲ್ಲೆಯಲ್ಲಿ ಸೆಪ್ಟೆಂಬರ ೭ ರಂದು ಆಚರಿಸಲ್ಪಡುವ ಗಣೇಶ ಉತ್ಸವವನ್ನು ಶಾಂತರೀತಿಯಿಂದ, ಸಂಭ್ರಮ ಸಡಗರದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗಣೇಶ ಉತ್ಸವ ಮಂಡಳಿಗಳಿಗೆ ಕರೆ ನೀಡಿದರು.

    ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿಂದು ಗಣೇಶ ಉತ್ಸವ ಕುರಿತು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ದಕ್ಕೆ ಬರದಂತೆ ಶಾಂತರೀತಿಯಿಂದ ಹಬ್ಬವನ್ನು ಆಚರಿಸಬೇಕು. ಪಿಓಪಿ ಗಣೇಶ ಮೂತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂತಿಗಳನ್ನು ಪ್ರತಿಷ್ಠಾಪಿಸಬೇಕು. ಹಬ್ಬದ ಆಚರಣೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ತಿಳಿಸಿದರು.

    ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಿಡಬ್ಲುಡಿ, ಪೊಲೀಸ್, ಹೆಸ್ಕಾಂ ಹಾಗೂ ನಗರಸಭೆಯಿಂದ ಪಡೆಯಬಹುದಾದ ಅನುಮತಿಯಲ್ಲಿ ಅಡೆತಡೆಯಾಗದಂತೆ ಏಕಗವಾಕ್ಷಿ ಪದ್ದತಿಯ ವ್ಯವಸ್ಥೆ ಮಾಡಲಾಗಿದೆ. ಅನುಮತಿಗಾಗಿ ಅನಗತ್ಯವಾಗಿ ತಡ ಮಾಡುವಂತಿಲ್ಲ. ವ್ಯವಸ್ಥೆ ನಿಮ್ಮ ಜೊತೆ ಇದ್ದು, ನಾವು ಬದಲಾವಣೆ ಆಗುವ ಅಗತ್ಯವಿದೆ. ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಾಲನೆ ಆಗಬೇಕು ಎಂದರು.

    ನಗರಸಭೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಮೂರು ಹನಮಂತನಗುಡಿ ಕ್ವಾರಿ ಹಳ್ಳ, ಕಾಡಗಿ ಹಳ್ಳ ಹಾಗೂ ಮಾರುದ್ರಪ್ಪನ ಹಳ್ಳ ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಗಣೇಶ ವಿಸರ್ಜನೆ ಮಾಡಬಹುದಾಗಿದೆ. ಬಾಗಲಕೋಟೆ ಹಳೆ ನಗರದಲ್ಲಿ ೧೦ ಬಾವಿಗಳನ್ನು ಸ್ವಚ್ಚ ಮಾಡಲಾಗಿದ್ದು, ಆ ಬಾವಿಗಳಲ್ಲಿ ಮೂರ್ತಿ ವಿಜರ್ಸಣೆ ಮಾಡಲು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಸರ್ವಜನಿಕರ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಪೆಂಡಾಲ ಹಾಕುವಾಗ ರಸ್ತೆಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಸಂಚಾರಕ್ಕೆ ಅಡಗಡೆಯಾಗದಂತೆ ಪೆಂಡಾಲ ಹಾಕಲು ತಿಳಿಸಿದರ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಗಣೇಶ ಮಂಡಳಿಯಿಂದ ವ್ಯಾಲೆಂಟರ್‌ಗಳನ್ನು ಸಹ ನಿಯೋಜಿಸಲು ತಿಳಿಸಿದರು. ನಗರದಲ್ಲಿ ೨೭೦೦ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಪ್ರತಿಷ್ಠಾನೆಗೊಳ್ಳಲಿವೆ ಎಂಬ ಮಾಹಿತಿ ಇದ್ದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರದ ರೀತಿಯಲ್ಲಿ ಹಬ್ಬವನ್ನು ಆಚರಿಸಲು ತಿಳಿಸಿದರು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದು, ಇವುಗಳ ಮೂಲಕ ಇಲಾಖೆ ಎಲ್ಲವನ್ನು ಗಮನಿಸುತ್ತದೆ ಎಂದರು.

    ಮೆರವಣಿಗೆಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಅಳವಡಿಕೆಗೆ ಮಿತಿಯನ್ನು ಹೇರಲಾಗಿದ್ದು, ಒಂದು ಬೇಸ್ ಹಾಗೂ ಒಂದು ಟಾಪ್ ಅಳವಡಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿ ೧೦ರ ನಂತರ ಡಿಜೆ ಸೌಂಡಗೆ ಅವಕಾಶವಿರುವದಿಲ್ಲ. ಅಷ್ಟರೊಳಗೆ ಗಣೇಶ ವಿಸರ್ಜನೆ ಮಾಡಲು ತಿಳಿಸಿದರು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ವಿದ್ಯುತ್ ಸಂಪರ್ಕವನ್ನು ಹೆಸ್ಕಾಂದಿಂದ ಪಡೆದುಕೊಳ್ಳಲು ಸೂಚಿಸಿದರು.

    ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಪ್ರಭಾರ ಅಪರ ಜಿಲ್ಲಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಗಣೇಶ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

    Share. Facebook Twitter Pinterest LinkedIn WhatsApp Reddit Tumblr Email
    Sanje

    Related Posts

    ರಾಜಕೀಯ December 20, 2024

    ದಲಿತರ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಯೋಜನೆ ರೂಪಿಸಲು ಮನವಿ

    ವಿಶೇಷ ವರದಿಗಳು December 20, 2024

    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆದರದ ಸ್ವಾಗತ!

    ವಿಶೇಷ ವರದಿಗಳು December 5, 2024

    ಬೀಳಗಿ ಕ್ರಾಸ್ ಹೆದ್ದಾರಿ ತಡೆದು ಸಂತ್ರಸ್ತರ ಪ್ರತಿಭಟನೆ

    ಜಿಲ್ಲೆಗಳು October 3, 2024

    ಲಡ್ಡು ಮುತ್ಯಾರ ಹೆಸರು ಬಳಸಿ ಟ್ರೋಲ್ ; ಭಕ್ತ ಮಂಡಳಿ ಆಕ್ರೋಶ

    ವಿಶೇಷ ವರದಿಗಳು October 1, 2024

    ಬಾಲಾಜಿ ಮಂದಿರದಲ್ಲಿ ವಿವಿಧ ಕಾರ್ಯಕ್ರಮ

    ವಿಶೇಷ ವರದಿಗಳು September 28, 2024

    ನಾಳೆ ಜನಾಕ್ರೋಶ ಪ್ರತಿಭಟನಾ ಮೆರವಣಿಗೆ

    Leave A Reply Cancel Reply

    Facebook X (Twitter) Instagram Pinterest
    © 2025 Sanjedarshan. Developed by Vikimediatec Pvt Ltd.
    ಮಹೇಶ ಅಂಗಡಿ , ಸಂಪಾದಕರು, ಸಂಜೆದರ್ಶನ ದಿನ ಪತ್ರಿಕೆ ,ಶಿವಗಿರಿ ಬಡಾವಣೆ 6ನೇ ಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102. ಮೋ:9845228092

    Type above and press Enter to search. Press Esc to cancel.