ಬಾಗಲಕೋಟೆ ; ಜಿಲ್ಲೆಯಲ್ಲಿ ಮಂಗಳವಾರವು ಪ್ರವಾಹ ಆರ್ಭಟ ಮುಂದುವರೆದಿದ್ರೆದು,ಕೃಷ್ಣಾ ಮತ್ತು ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಘಟಪ್ರಭಾ ಪ್ರವಾಹ ಆರ್ಭಟಕ್ಕೆ ಜನ ಜೀವನ ಅಸ್ಥವ್ಯಸ್ಥೆಗೊಂಡಿದೆ.
ಮಂಗಳವಾರ ಬೆಳಗ್ಗೆ ಕಲಾದಗಿ- ಅಂಕಲಗಿ ( ಕಾತರಕಿ) ಬ್ರಿಡ್ಜ್ ಕಂ ಬ್ಯಾರೇಜ ಸೇತುವೆ ಮೇಲೆ ನೀರು ಬಂದಿದ್ದು, 20 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ನೀರಿನ ಪ್ರಮಾಣದಿಂದ ಕಾತರಕಿ, ಆಲಗುಂಡಿ, ಕುಂದರಗಿ, ಅರಕೇರಿ ಭಾಗದ ಸಂಪರ್ಕ ಕಡಿತವಾಗಿದೆ.ಈ ಗ್ರಾಮಗಳಿಗೆ ತೆರಳುವವರು 15 ಕಿ.ಮೀ ಸುತ್ತುವರೆದು ಸಾಗಬೇಕಾಗಿದ್ದು, ಸಂಚಾರ ಬಂದ್ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ತೆರಳುವ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.