ಬಾಗಲಕೋಟೆ : ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವಿಷಯ ನಿರ್ವಾಹಕ ಪ್ರಕಾಶ ಅಂಗಡಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆ ಸಿಕ್ಕಿಬಿದ್ದಿದ್ದಾರೆ.
ಸದರ ವ್ಯಕ್ತಿಯು ಮಹಾದೇವಪ್ಪ ಸಣ್ಣದೇವರ ನಿವೃತ್ತಿಯ ನಂತರ ಬಾಕಿ ಇರುವ ಗಳಿಕೆ ರಜೆ ನಗದೀಕರಣ ಮಾಡಿಕೊಡಲು ೭ ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದರು. ಇವರು ಸಲ್ಲಿಸಿದ ದೂರಿನನ್ವಯ ಲಂಚದ ಹಣ ಸ್ವೀಕರಿಸುವಾಗ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ.
ಸದರಿ ದಾಳಿಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾರ್ಗದರ್ಶನ ಹಾಗೂ ಪೊಲೀಸ್ ಉಪಾಧೀಕ್ಷ ಸಿದ್ದೇಶ್ವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಬಸವರಾಜ ಮುಕರ್ತಿಹಾಳ ಹಾಗೂ ಸಿಬ್ಬಂದಿಗಳಾದ ಬಸವರಾಜ ದೇಸಾ, ನಾಗಪ್ಪ ಪೂಜಾರಿ, ಭೀಮನಗೌಡ ಪಾಟೀಲ, ಶಂಕರ ಬಳಬಟ್ಟಿ, ಹನಮಂತ ಹಲಗತ್ತಿ, ಶಿವಾನಂದ ಮ್ಟುಗೇರಿ, ರಾಮನಗೌಡ ಗಾಡರ, ರಾಜನಾಳ, ಶಶಿಧರ ಚುಚ್ಯಾಳ, ಮಹೇಶ ಹೊಡಗೌಡ್ರ ದಾಳಿಯಲ್ಲಿ ಪಾಲ್ಗೊಂಡಿದ್ದರು.