ಬಾಗಲಕೋಟೆ: ಸರ್ಕಾರವು ಸಾಂಪ್ರದಾಯಕ ಅಲೆಮಾರಿ ಕುರಿಗಾಹಿಗಳ ಅಧಿನಿಯಮ-೨೦೨೫ ಜಾರಿಗೆ ತಂದಿರುವುದರಿಂದ ಕುರಿಗಾಹಿ ಸಮುದಾಯದ ದಶಕಗಳ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಸಾಂಪ್ರದಾಯಕ ಅಲೆಮಾರಿ ಕುರಿಗಾ ಹಿಗಳ ಅಧಿನಿಯಮ-೨೦೨೫ರ ಈ ಕಾಯಿದೆಯ ಜಾರಿಯಿಂದ ಕುರಿಗಾಹಿಗಳಿಗೆ ಕಾನೂನುಬದ್ಧ ಭದ್ರತೆ ದೊರೆಯಲಿದೆ. ಸಾಂಪ್ರದಾಯಕ ಸಂಚಾರಿ ಜೀವನ ಶೈಲಿ, ವೃಕ್ತಿ ಮತ್ತು ಹಕ್ಕುಗಳಿಗೆ ಸರ್ಕಾರ ಮಾನ್ಯತೆ ನೀಡಿರುವುದು ಕುರಿಗಾಹಿ ವೃತ್ತಿ ಸಮುದಾಯದ ಭವಿಷ್ಯವನ್ನು ಬಲಪಡಿಸುತ್ತದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾನೂನು ಹೋರಾಟಕ್ಕೆ ಮಾರ್ಗದರ್ಶನ ಮಾಡಿದ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರವರಿಗೆ ಹಾಗೂ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಿ ಯಶಸ್ವಿಗೆ ತೋರಿದ ಶ್ರಮ, ದೃಢನಿಲುವು ಮತ್ತು ಬದ್ಧತೆಗೆ, ಪಶುಸಂಗೋ ಪನಾ ಸಚಿವ ಕೆ. ವೆಂಕಟೇಶ್ ಅವರಿಗೆ ಧನ್ಯವಾದ ಸಲ್ಲಿಸಿದರು.
ವಿಧಾನಸಭೆಯೊಳಗೆ ಕುರಿಗಾಹಿಗಳ ಪರವಾಗಿ ಧ್ವನಿ ಎತ್ತಿ, ಮೀಸಲು ಅರಣ್ಯ ಪ್ರದೇಶಗಳಲ್ಲಿಯೂ ಕುರಿಗಾಹಿಗಳಿಗೆ ಮೆಯಿಸುವ ಹಕ್ಕು ದೊರಕಬೇಕು ಎಂಬ ಮಹತ್ವದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಜೆ.ಟಿ. ಪಾಟೀಲ ಅವರಿಗೂ ಧನ್ಯವಾದ ಸಲ್ಲಿಸಿದರು. ೨೦೨೨ ರಿಂದ ಕುರಿಗಾಹಿಗಳ ಸಂಘಟಿತ ಹೋರಾಟ ಪ್ರಾರಂಭವಾಗಿ ನಂತರ ೨೦೨೫ ಐದಾಮಿ ತಾಲೂಕಿನ ಉಗಲವಾಡಿ ಗ್ರಾಮದ ಶರಣಪ್ಪ ಜಮ್ಮನಕಟ್ಟ ಕುರಿಗಾಹಿಯ ಹತ್ಯೆಯನ್ನು ಖಂಡಿಸಿ ಮತ್ತು ಕಾಯ್ದೆ ಟಾರಿಗೆ ರಾಜ್ಯದ್ಯಾಂತ ಹೋರಾಟ ಮಾಡಲಾಯಿತು. ಎಲ್ಲ ಕಡೆ ಕುರಿಗಾಹಿಗಳ ಸಂಘಟಿತ ಹೋರಾಟದ ಫಲವಾಗಿ ಈ ಕಾಯ್ದೆ ಜಾರಿಯಾಗಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಈ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳು ಮತ್ತು ಕೆಲ ಅಂಶಗಳ ಸೇರ್ಪಡೆ ಆಗಬೇಕಿದೆ. ಮುಂದಿನ ಚಳಿಗಾಲ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಸವರಾಜ ಧರ್ಮತಿ, ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಸುವರ್ಣಾ ನಾಗರಾಳ ಇದ್ದರು.